ದೊಡ್ಡಣ್ಣ

ಸುಮಾರು 800 ಚಿತ್ರಗಳಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಭಾರತೀಯ ನಟ ದೊಡ್ಡಣ್ಣ ಅವರು11 ನವೆಂಬರ್ 1949 ಭದ್ರಾವತಿಯಲ್ಲಿ ಜನಿಸಿದರು. ಕುಟುಂಬದ ಕಿರಿಯ ಮಗ ದೊಡ್ಡಣ್ಣ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕುಟುಂಬದ ಕಿರಿಯ ಮಗನಾದ ಇವರಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರು ಇಟ್ಟಿದರು ಮತ್ತು ದೊಡ್ಡಣ್ಣ ಅವರ ಹೆಂಡತಿಯಾ ಹೆಸರು ಶಾಂತ.

ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.

ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2012 ರಲ್ಲಿ, ಸುರಸುಂದರಾಂಗಿಗಾಗಿ ಅತ್ಯುತ್ತಮ ಪೋಷಕ ನಟನಿಗಾಗಿ SIIMA ಪ್ರಶಸ್ತಿ, ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2019 ಹಾಗು ಇತರೆ ಪ್ರಶಸ್ತಿಗಳು ದೊರೆತಿವೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ