ಬಿ. ಅಜನೀಶ್ ಲೋಕನಾಥ್
ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಇವರು 20 ನವೆ೦ಬರ್ 1986 ಭದ್ರಾವತಿ ಜನಿಸಿದರು.
ಅಜನೀಶ್ ಅವರು ಉಳಿದವರು ಕಂಡಂತೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ರಂಗಿತರಂಗ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
ಇವರಿಗೆ ಉಳಿದವರು ಕಂಡಂತೆ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿ ದೊರೆತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ IFA ಉಸ್ತವಂ ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು ಫಿಲಂಫೇರ್ ಪ್ರಶಸ್ತಿ ದೊರೆತಿದೆ.