ಗುಂಡಪ್ಪ ವಿಶ್ವನಾಥ್
ಗುಂಡಪ್ಪ ರಂಗನಾಥ್ ವಿಶ್ವನಾಥ್ 12 ಫೆಬ್ರವರಿ 1949 ರಂದು ಭದ್ರಾವತಿಯಲ್ಲಿ ಜನಿಸಿದರು. ಇವರು ಮಾಜಿ ಭಾರತೀಯ ಕ್ರಿಕೆಟಿಗ. ಮಾರ್ಚ್ 1978 ರಲ್ಲಿ, ಗುಂಡಪ್ಪ ವಿಶ್ವನಾಥ್ ಅವರು ತಂಡದ ಸಹ ಆಟಗಾರ ಸುನಿಲ್ ಗವಾಸ್ಕರ್ ಅವರ ಸಹೋದರಿ ಕವಿತಾ ಅವರನ್ನು ವಿವಾಹವಾದರು. ಅವರಿಗೆ ದೈವಿಕ್ ಎಂಬ ಮಗನಿದ್ದು ಬೆಂಗಳೂರಿನಲ್ಲಿ ವಾಸವಿದ್ದಾರೆ.
ವಿಶ್ವನಾಥ್ ಅವರು 1970 ರ ದಶಕದ ಉದ್ದಕ್ಕೂ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ರೇಟ್ ಮಾಡಲ್ಪಟ್ಟರು. ಇವರು ಮಧ್ಯಮ ಕ್ರಮಾಂಕದ ಕಲಾತ್ಮಕ ಬಲಗೈ ಬ್ಯಾಟ್ಸಮನ್ನರಾಗಿದ್ದರು. ಇವರು ಭಾರತೀಯ ಕ್ರಿಕೆಟ್ ಮಂಡಳಿಯ ಭಾರತದ ಕ್ರಿಕೆಟ್ ತಂಡವನ್ನು ಆಯ್ಕೇ ಮಾಡುವ ತಂಡದ ಮುಖ್ಯಸ್ಥರಾಗಿದ್ದರು. ಇವರು ೧೯೮೩ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದರು.
ವಿಶ್ವನಾಥ್ ಅವರು 1969 ರಿಂದ 1983 ರವರೆಗೆ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದರು, 91 ಪಂದ್ಯಗಳನ್ನು ಆಡಿದರು ಮತ್ತು 6,000 ಕ್ಕೂ ಹೆಚ್ಚು ರನ್ ಗಳಿಸಿದರು. ಅವರು 1975 ಮತ್ತು 1979 ರ ವಿಶ್ವಕಪ್ ಸೇರಿದಂತೆ 1974 ರಿಂದ 1982 ರವರೆಗೆ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದರು.