ಬಳ್ಳಿಗಾವಿ
ಬಳ್ಳಿಗಾವಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಪಟ್ಟಣವಾಗಿದೆ. ಈ ಪ್ರದೇಶವು ಶಿಕಾರಿಪುರ ಪಟ್ಟಣದಿಂದ ಸುಮಾರು 21 ಕಿ.ಮೀ ದೂರದಲ್ಲಿ ಇದೆ. ಬಳ್ಳಿಗಾವಿಯು ಆಲ್ಲಮಪ್ರಭುಗಳ ಜನ್ಮಸ್ಥಳವೂ ಹೌದು ಮತ್ತು ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆಯು ಕೂಡ ಹೌದು. ಇಲ್ಲಿ ಕೇದಾರೇಶ್ವರ ದೇವಾಲಯವು ಇದೆ.
ಕೇದಾರೆಶ್ವರ ದೇವಾಲಯವು ಹೊಯ್ಸಳ ಶೈಲಿಯಲ್ಲಿದ್ದು, ಕೇದಾರೆಶ್ವರ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು. ಬಳ್ಳಿಗಾವೆ ಕಲ್ಯಾಣಿ ಚಾಲುಕ್ಯರ ದಕ್ಷಿಣ ಭಾಗದ ನಾಡಿನ ಪ್ರಮುಖ ರಾಜಧಾನಿಯಾಗಿತ್ತು. ಶಿರಾಳಕೊಪ್ಪದಿಂದ 03 ಕಿಮಿ ದೂರ ಇರುವ ಈ ಪುಟ್ಟ ಊರು ಚಾಲುಕ್ಯ ಮತ್ತು ಹೊಯ್ಸಳ ಕಾಲದ ಹಲವು ದೇವಾಲಯಗಳನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರ ಬಿಂದುವು ಕೂಡ ಆಗಿತ್ತು.
ಹೆಚ್ಚುವರಿಯಾಗಿ, ಬಲ್ಲಿಗಾವಿಯು ಕೇದಾರೇಶ್ವರ ದೇವಾಲಯ ಮತ್ತು ತ್ರಿಪುರಾಂತಕೇಶ್ವರ ದೇವಾಲಯ ಪ್ರಸಿದ್ದಿ ಪಡಿದಿದೆ. ಒಟ್ಟಾರೆಯಾಗಿ, ಬಳ್ಳಿಗಾವಿಯು ಇತಿಹಾಸದ ಉತ್ಸಾಹಿಗಳಿಗೆ, ಪುರಾತತ್ವಶಾಸ್ತ್ರಜ್ಞರಿಗೆ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಆಸಕ್ತಿ ಹೊಂದಿರುವವರಿಗೆ ಮಹತ್ವದ ತಾಣವಾಗಿದೆ.