ಜಿ ಎಸ್ ಶಿವರುದ್ರಪ್ಪ
ಜಿ. ಎಸ್. ಶಿವರುದ್ರಪ್ಪ ಇವರು ತಂದೆ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ ಎಂಬ ದಂಪತಿಗಳಿಗೆ ಫೆಬ್ರುವರಿ 7,1926 ರಂದು ಶಿಕಾರಿಪುರ ತಾಲೂಕಿನ ಈಸೂರುಗ್ರಾಮದಲ್ಲಿ ಜನಿಸಿದರು. ಈ ಗ್ರಾಮವು ಸುಮಾರು ಬೆಂಗಳೂರಿನಿಂದ 390 ಕಿ.ಮೀ. ದೂರದಲ್ಲಿದೆ. ಶಿಕಾರಿಪುರದಿಂದ ಸುಮಾರು 10 ಕಿ.ಮೀ ಮತ್ತು ಶಿವಮೊಗ್ಗದಿಂದ 52 ಕಿಮೀ ದೂರದಲ್ಲಿದೆ.
ಜಿ. ಎಸ್. ಶಿವರುದ್ರಪ್ಪನವರು ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ 1949 ರಲ್ಲಿ ಪದವಿ ಪಡೆದರು. ರುದ್ರಾಣಿಯವರನ್ನು ಧರ್ಮ ಪತ್ನಿ ಯಾಗಿ 1950ರ ಮೇ ತಿಂಗಳಲ್ಲಿ ಮದುವೆಯಾದರು.
ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. 1953 ರಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. 1955ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.
ಇವರು ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಹೀಗೆ ಹಲವಾರು ಪ್ರವಾಸ ಕಥನಗಳನ್ನೂ, ದೇವಶಿಲ್ಪ, ದೀಪದ ಹೆಜ್ಜೆ ಹೀಗೆ ಹಲವಾರು ಕವನ ಸಂಕಲನಗಳು ಮತ್ತು ಹಲವಾರು ಜೀವನ ಚರಿತ್ರೆ ಮತ್ತು ವಿಮರ್ಶೆ/ಗದ್ಯ ಬರೆದಿದ್ದರೆ.
ಇವರಿಗೆ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ನಂತರ ‘ರಾಷ್ಟ್ರಕವಿ'(ನವೆಂಬರ್ ೧, ೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು) ಹೀಗೆ ಹಲವಾರು ಗೌರವಕ್ಕೆ ಪಾತ್ರರಾದವರು.
ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ಮರಣ ಹೊಂದಿದರು.