ರಾಜ ಕಲ್ಲು
ರಾಜ ಕಲ್ಲು ಈ ಸ್ಥಳವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಜೋಗ್ ಫಾಲ್ಸ್ ಹತ್ತಿರ ಇರುವ ಒಂದು ಪ್ರವಾಸಿ ಸ್ಥಳವಾಗಿದೆ. ಈ ಸ್ಥಳವು ಜೋಗ್ ಫಾಲ್ಸ್ ವೀಕ್ಷಣೆ ನೋಡಲು ಒಂದು ಪ್ರಮುಖ ಸ್ಥಳವಾಗಿದೆ.
ರಾಜಾ ಕಲ್ಲು ಒಂದು ರಾಜಾ ಕಲ್ಲು ಮೈಸೂರು ದೊರೆ IV ಕೃಷ್ಣ ರಾಜ ಒಡೆಯರ್ ಅವರ ನೆಚ್ಚಿನ ತಾಣವಾಗಿತ್ತು. 1939 ರಲ್ಲಿ ಈ ಸ್ಥಳದಲ್ಲಿ ಅವರು ಜಲವಿದ್ಯುತ್ ಯೋಜನೆಗೆ ಅಡಿಗಲ್ಲು ಹಾಕಿದರು. ರುದ್ರರಮಣೀಯವಾದ ಶರಾವತಿ ಕಣಿವೆಯನ್ನು ನೋಡಿದರೆ, ಅದು ರಾಜನಿಗೆ ಏಕೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಈ ಸ್ಥಳವನ್ನು ಇತ್ತೀಚೆಗೆ ನವೀಕರಿಸಲಾಗಿದೆ ಮತ್ತು ಖಂಡಿತವಾಗಿಯೂ ಉತ್ತಮ ಭಾವನೆಯನ್ನು ನೀಡುತ್ತದೆ.