ದಂಡಾವತಿ ನದಿ
ದಂಡಾವತಿಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಹರಿಯುವ ಒಂದು ಸಣ್ಣ ನದಿ. ದಂಡಾವತಿ ನದಿಯ ಉಗಮವು ಸೊರಬ ತಾಲೂಕಿನ, ಸೊರಬ ಪಟ್ಟಣದಿಂದ ದಕ್ಷಿಣಕ್ಕೆ 15 ಕಿಮೀ ದೂರದಲ್ಲಿರುವ ಕುಪ್ಪೆ ಗ್ರಾಮದ ಹತ್ತಿರವಿರುವ ಕಟ್ಟಿನಕೆರೆಯಗಿದೆ, ಕಟ್ಟಿನಕೆರೆ ಕೋಡಿ ಮತ್ತು ಸುತ್ತಲಿನ ನೀರಿನ ಹರಿವು ಸೇರಿ ದಂಡಾವತಿ ನದಿಯಗಿ ಮುಂದೆ ಹರಿಯುತ್ತದೆ. ದಂಡಾವತಿ ನದಿಯು ಒಟ್ಟು 118.88 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ, ಈ ಪ್ರದೇಶವು 75° E ಮತ್ತು 75° 30’E ರಲ್ಲಿದೆ.
ದಂಡಾವತಿ ನದಿಯು ಉತ್ತರಾಭೀಮುಕವಾಗಿ 55 ಕಿಮೀ ದೂರ ಹರಿದು ಅನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರಾದಾ ನದಿಗೆ ಸೇರುತ್ತದೆ. ಮುಂದೆ ವರದಾ ನದಿಯು ತುಂಗಭದ್ರ ನದಿಗೆ ಸೇರುತ್ತದೆ ಮತ್ತು ನಂತರ ತುಂಗಭದ್ರ ನದಿಯು ಕೃಷ್ಣಾ ನದಿಗೆ ಸೇರಿ ಅಂತಿಮವಾಗಿ ಭಾರತದ ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.