ಸಕ್ಕರೆ ಬೈಲು
ಸಕ್ಕರೆ ಬೈಲು ಅಥವಾ ಸಕ್ರೆಬೈಲು ಶಿವಮೊಗ್ಗ ಜಿಲ್ಲೆಯ ಆನೆ ತರಬೇತಿ ಶಿಬಿರವಾಗಿದೆ. ಸಕ್ರೆಬೈಲು ಆನೆಧಾಮ ಶಿವಮೊಗ್ಗದಿಂದ 13.8 ಕಿ.ಮೀ ದೂರದಲ್ಲಿದೆ.
ಗಾಜನೂರು ಅಣೆಕಟ್ಟಿನ ಬಳಿ ಇರುವ ಈ ಶಿಬಿರದಲ್ಲಿ ಪ್ರವಾಸಿಗರಿಗೆ ಆನೆ ತರಬೇತಿ, ಆನೆ ಸವಾರಿ ಮುಂತಾದ ಚಟುವಟಿಕೆಗಳು ನಡೆಯುತ್ತವೆ. ಶಿಬಿರವು ಪ್ರವಾಸಿಗರಿಗೆ ಪ್ರತಿದಿನ ಬೆಳಿಗ್ಗೆ 8 ರಿಂದ 11 ರವರೆಗೆ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿಗೆ ಬಿಡಲಾಗುತ್ತದೆ. ಕಾಡಿನಲ್ಲಿ ರಾತ್ರಿ ತಂಗುವ ಆನೆಗಳನ್ನು ಮುಂಜಾನೆ ಶಿಬಿರಕ್ಕೆ ಕರೆತರಲಾಗುತ್ತದೆ.