ಆಶಾ ಭಟ್

ರಾಬರ್ಟ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ನಾಯಕಿ ಜೀವನಕ್ಕೆ ಪಾದಾರ್ಪಣೆ ಮಾಡಿಧ ಆಶಾ ಭಟ್ ಅವರು 1992ನೇ ಸೆಪ್ಟೆಂಬರ್ 02 ರಂದು ಕರ್ನಾಟಕದ ಭದ್ರಾವತಿಯಲ್ಲಿ ಜನಿಸಿದರು. ಕನ್ನಡ ಬ್ರಾಹ್ಮಣ ಕುಟುಂದಲ್ಲಿ ಜನಿಸಿದ ಇವರ ತಂದೆಯ ಹೆಸರು ಸುಬ್ರಹ್ಮಣ್ಯ ಭಟ್ ಹಾಗೂ ತಾಯಿ ಶ್ಯಾಮಲ ಭಟ್. ಆಶಾ ಭಟ್ ಅವರು ಕರ್ನಾಟಕ ಮೂಲದ ಭಾರತೀಯ ರೂಪದರ್ಶಿ. ಇವರು ತಮ್ಮ 22ನೇ ವಯಸ್ಸಿನಲ್ಲಿಯೇ ಮಿಸ್ ಸುಪ್ರ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇವರು ಈ ಬಿರುದನ್ನು ಪಡೆದ ಮೊದಲ ಭಾರತೀಯ ಮಹಿಳೆ.

ಆಶಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭದ್ರಾವತಿಯ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಿಂದ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆದರು ಪುಣೆಯ ಐಐಟಿ ಜೆಇಇ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರೈಮ್ ಅಕಾಡೆಮಿಯಲ್ಲಿ ಅವರು ವಿದ್ಯಾರ್ಥಿಯಾಗಿದ್ದರು.

ಇವರು ಕನ್ನಡದ ಜಂಗ್ಲಿ ಮತ್ತು ರಾಬರ್ಟ್ ಸಿನಿಮಾದಲ್ಲಿ ನಟಿಸಿದರೆ. 2014 ರಲ್ಲಿ ಟೈಮ್ಸ್ ಗ್ರೂಪ್ ಆಯೋಜಿಸಿದ ಮಿಸ್ ದಿವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು ಮಿಸ್ ಇಂಡಿಯಾ ಸುಪ್ರಾನ್ಯಾಶನಲ್ 2014 ಕಿರೀಟವನ್ನು ಪಡೆದರು. ಮಿಸ್ ದಿವಾ 2014 ರಲ್ಲಿ ಆಶಾ ಇದರಲ್ಲಿ ಮಿಸ್ ಕಾನ್ಜೆನಿಯಾಲಿಟಿ, ಮಿಸ್ ಬ್ಯೂಟಿಫುಲ್ ಸ್ಮೈಲ್ ಮತ್ತು ಮಿಸ್ ಫ್ಯಾಸಿನೇಟಿಂಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ