ಎಸ್ ನಾರಾಯಣ್

ಎಸ್. ನಾರಾಯಣ್ ಕನ್ನಡ ಚಿತ್ರರಂಗದ, ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ. ಇವರು ಜನಿಸಿದ್ದು 05 ಜೂನ್ 1962 ರಲ್ಲಿ ಭದ್ರಾವತಿಯಲ್ಲಿ ಜನಿಸಿದರು. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರ ಸಾಹಿತಿ ಹೀಗೆ ಬಹುಮುಖೀ ಪ್ರತಿಭೆ.

ಸಿನಿಮಾ ಸೇರಬೇಕೆಂದು ನಾರಾಯಣ್ 1981ರಲ್ಲಿ ಬೆಂಗಳೂರಿಗೆ ಬಂದಾಗ ಹರಕಲು ಶರಟು, ಒಂದು ರೂಪಾಯಿ ಇತ್ತಂತೆ. ಎಸ್. ನಾರಾಯಣ್ ಅವರು ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದು ಅಂದು ಜನಪ್ರಿಯ ನಿರ್ದೇಶಕರಾಗಿದ್ದ ಭಾರ್ಗವ, ಎ.ಟಿ. ರಘು, ರಾಜ್‌ಕಿಶೋರ್ ಮುಂತಾದವರ ಬಳಿ ಸಹಾಯಕರಾಗಿ ಸೇರಿಕೊಂಡರು.

ಮೊದಲ ಚಿತ್ರ `ಚೈತ್ರದ ಪ್ರೇಮಾಂಜಲಿ` ಮಾಡಿದಾಗ ಹಂಸಲೇಖ ಜೊತೆಯಲ್ಲಿದ್ದರು. ಎಲ್ಲರ ಮನದಲ್ಲಿ ಉಳಿದಿದ್ದ ಹಾಡುಗಳು ಚಿತ್ರಕ್ಕೂ, ನಿರ್ದೇಶಕ ನಾರಾಯಣ್ ಅವರಿಗೂ ಜನಮನ್ನಣೆ ತಂದುಕೊಟ್ಟಿತು. ಮೊದಲನೆ ಚಿತ್ರದಲ್ಲೇ ನಾರಾಯಣ್‌ ಅವರಿಗೆ ಯಶಸ್ಸು ಕೂಡಿಬಂತು. ನಂತರ ಅವರದು ನೇರ ಹಾದಿ. ಈ ಹಾದಿಯಲ್ಲಿ ಸೋಲು, ಗೆಲುವು ಸಮಸಮನಾಗಿದೆ. ಇದುವರೆವಿಗೂ ಅವರು ಸುಮಾರು 45 ಚಿತ್ರಗಳನ್ನು ನಿರ್ದೇಶಿಸಿದ್ದು ಸುಮಾರು ಇಪ್ಪತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇವರು ಕೇವಲ ಸಿನಿಮಾಗಳಲ್ಲಿ ಮಾತ್ರ ನಟಿಸದೆ ಟಿವಿ ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದ ಧಾರವಾಹಿಗಳಲ್ಲಿ ನಟಿಸುವುದರ ಜೊತೆಗೆ ಕೆಲ ಧಾರಾವಾಯಿಗಳನ್ನು ನಿರ್ದೇಶನ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ