ಭದ್ರಾವತಿ ರಾಮಾಚಾರಿ

ಲೇಖಕ ಡಾ. ಭದ್ರಾವತಿ ರಾಮಾಚಾರಿ ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದಲ್ಲಿ ಜನಿಸಿದರು. ತಂದೆ ವೀರಾಚಾರಿ ಮತ್ತು  ತಾಯಿ ಪಾರ್ವತಮ್ಮ.

ಚೈತ್ರ ತಂದ ಚಿಗುರು, ಹರಕೆ, ನೆನಪೊಂದೇ ಶಾಶ್ವತ,  ಭಾವನದೀ, ಅಮ್ಮಾ ನನ್ನನ್ನೂ ‌ಸ್ವಲ್ಪ ಅರ್ಥ ಮಾಡ್ಕೋ, ಆಶಾಕಿರಣ , ದೇವರು ಬಂದಾಗ ಇನ್ನು ಹಲವಾರು ಕಾದಂಬರಿಗಳನ್ನೂ ಇವರು ಬರೆದಿದ್ದರೆ,  ದೀಪ ಹಚ್ಚುವ ಸಮಯ(ಕಥಾಸಂಕಲನ), ಆಶಾ ಕಿರಣ(ಮಕ್ಕಳ ಕಾದಂಬರಿ), ಅಭಿರಾಮಿ ಮತ್ತು ಇತರ ಕಥೆಗಳು, ನಮ್ಮ ಬದುಕಿನ ಸುತ್ತ, ಕನಸುಗಳು ನೂರಾರು, ಹೊಸ ಚಿಗುರು(ಸಂಪಾದಿತ ಕೃತಿ), ತುಂತುರು ಮಳೆ ಹನಿ(ಸಂಪಾದಿತ ಕೃತಿ). ದೀಪ ಹಚ್ಚುವ ಸಮಯ ಪಯಣಿಗರು, ಬೆಳಕು ನೀನಾದೆ, ಬೇವರ್ಸಿ ಬರೆದ ಕಥೆಗಳು ಇವು ಇವರ ಕಥಾ ಸಂಕಲನಗಳು.

ಭದ್ರಾವತಿ ಆಕಾಶವಾಣಿಯಿಂದ 12 ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ. 1992 ರಲ್ಲಿ “ಪ್ರೀತಿ” ಎಂಬ ಕಥೆ ರಚನೆ, ತೀರ್ಥಹಳ್ಳಿಯ ‘ಸಹ್ಯಾದ್ರಿ ವಾರ್ತೆ’ ಎಂಬ ಕನ್ನಡ ವಾರ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಇವರು ಹಲವಾರು ಕಾದಂಬರಿ, ಕಥಾಸಂಕಲನ ಇವರು ಬರೆದಿದ್ದರೆ. ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕd ಎಲ್ಲ ಬಾನುಲಿ ಕೇಂದ್ರದಿಂದ ಏಕಕಾಲಕ್ಕೆ ಪ್ರಸಾರವಾಗಿವೆ. ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ-ಮಾಸಿಕ ಪತ್ರಿಕೆಗಳಲ್ಲಿ 386ಕ್ಕೂ ಹೆಚ್ಚು ಕತೆ-ಲೇಖನಗಳು ಪ್ರಕಟವಾಗಿವೆ. 

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ