ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ ಭದ್ರಾವತಿ
ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹಾದ್ದೂರ್ ರವರು ಸ್ಥಾಪಿಸಿದ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (ಎಮ್ ಪಿ ಎಮ್) ಅನ್ನು ಅಂದಿನ 1917ರ ಮೈಸೂರು ಕಂಪನಿಗಳ ಅಧಿನಿಯಮದ ನಿಯಮ VIII ರ ಅಡಿಯಲ್ಲಿ 20 ಮೇ 1936 ರಂದು ಇನ್ ಕಾರ್ಪೊರೇಟ್ ಮಾಡಿಕೊಳ್ಳಲಾಯಿತು. ನಂತರ ಅದು ಸರ್ಕಾರಿ ಕಂಪನಿಯಾಗಿ 1977ರಲ್ಲಿ 1956ರ ಕಂಪನಿಗಳ ಅಧಿನಿಯಮದ ಪ್ರಕರಣ 617ರ ಅಡಿಯಲ್ಲಿ ಬದಲಾಯಿತು. ಕಂಪನಿಯ ನೋಂದಾಯಿಸಿದ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಅದರ ಘಟಕ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದೆ.
ಕಂಪನಿಯ ಅಧಿಕೃತ ಬಂಡವಾಳ 150 ಕೋಟಿ. ಪಾವತಿಸಿದ ಬಂಡವಾಳ ಸುಮಾರು 120 ಕೋಟಿ. ಕಂಪನಿಯ ಶೇರುಗಳನ್ನು ಬಾಂಬೆಯ ಸ್ಟಾಕ್ ಎಕ್ಸಚೇಂಜ್ ನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಕಂಪನಿಗೆ ಸುಮಾರು 17,000 ಶೇರ್ ಹೋಲ್ಡರ್ಸ್ ಇದ್ದಾರೆ. ಕರ್ನಾಟಕ ಸರ್ಕಾರ ಕಂಪನಿಯ 65% ಶೇರುಗಳನ್ನು ಹೊಂದಿದೆ. ಐಡಿಬಿಐ ಮತ್ತು ಇತರ ಹಣಕಾಸು ಸಂಸ್ಥೆಗಳು 18% ಶೇರುಗಳನ್ನು ಹೊಂದಿದ್ದರೆ 17% ಅಷ್ಟು ಸಾರ್ವಜನಿಕರ ಶೇರುಗಳಿವೆ.
ಕಂಪನಿಯ ಆಡಳಿತವನ್ನು ಐಎಎಸ್, ಐಎಫ್ಎಸ್ ಮತ್ತು ಇತರ ವೃತ್ತಿದಾರರಿರುವ ಸಮರ್ಥ ನಿರ್ದೇಶಕರ ಮಂಡಳಿಯಿಂದ ಮಾಡಲಾಗುತ್ತದೆ. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಹಕಾರಕ್ಕೆ ಉತ್ಪಾದನೆ, ಹಣಕಾಸು, ಮಾರ್ಕೆಟಿಂಗ್ ಇತ್ಯಾದಿ ವಿಭಾಗಗಳಲ್ಲಿ ಪರಿಣಿತಿ ಇರುವ ವೃತ್ತಿದಾರರ ತಂಡದ ಜೊತೆಗೆ ನಿಷ್ಠಾವಂತ ಕೆಲಸಗಾರರ ದಂಡೇ ಇದೆ. ಮೈಸೂರು ಕಾಗದ ಕಾರ್ಖಾನೆಯು ತನ್ನದೇ ಅದ ಸ್ವಂತ ಉಪನಗರವನ್ನು (ಟೌನ್ ಶಿಫ್) ಹೊಂದಿರುತ್ತದೆ.