ದೇವಗಂಗೆ

ದೇವಗಂಗೆ ಕೊಳ ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇದೆ.  ಈ ಕೊಳಕ್ಕೆ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ ಸುಮಾರು ೦೫ ರಿಂದ 06 ಕಿ.ಮಿ ದೂರದಲ್ಲಿ ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ. ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ. ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.

ಈ ಕೊಳವು ಕೆಳದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಈ ಕೊಳ ಸಂಪೂರ್ಣ ಶಿಲಾಮಯವಾಗಿದೆ. ಚಪ್ಪಡಿ ಬಳಸಿ ನಿರ್ಮಿಸಿದ ಕೊಳದ ನಡುವೆ ಕಲ್ಲಿನ ತೊಟ್ಟಿಲು ಮಾದರಿ ನಿರ್ಮಿಸಲಾಗಿದೆ. ತೊಟ್ಟಿಲು ತಲುಪಲು ಕಾಲುಸಂಕ, ಕೊಳದ ಸುತ್ತಲೂ ಕಟಾಂಜನ, ಕೊಳಕ್ಕೆ ಇಳಿಯಲು ಪಾವಟಿಗೆಗಳು ಕಣ್ಮನ ಸೆಳೆಯುತ್ತವೆ. ದೊಡ್ಡ ಕೊಳದಿಂದ ನೀರು ಹರಿಯುವ ದಿಕ್ಕಿನಲ್ಲಿ ಒಟ್ಟು 07 ಸಣ್ಣ ಕೊಳಗಳಿವೆ. ಬಗೆಬಗೆ ಆಕಾರ, ವಿನ್ಯಾಸದಲ್ಲಿದ್ದು, ನಯನ ಮನೋಹರವಾಗಿದೆ.

ಸುಮಾರು 04 ಶತಮಾನಗಳ ಹಿಂದೆಯೇ ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿರುವ ಈ ಕೊಳವನ್ನು ನೆಲಮಟ್ಟದಿಂದ ಸುಮಾರು 15 ಅಡಿಗಳ ಆಳದಲ್ಲಿ ನಿರ್ಮಿಸಲಾಗಿದೆ. ಕೊಳದ ಒಂದು ಪಾಶ್ರ್ವದಲ್ಲಿ ಈಶ್ವರ ದೇವಸ್ಥಾನವಿದೆ. ಇನ್ನೊಂದು ಬದಿಯಲ್ಲಿ ಅರಸರ ಕಾಲದಲ್ಲಿ ಹೂವಿನ ಉದ್ಯಾನವನ ಇತ್ತು ಎನ್ನಲಾಗುತ್ತಿದೆ. 

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!