ಹಿಡ್ಲುಮನೆ ಜಲಪಾತ
ಹಿಡ್ಲುಮನೆ ಜಲಪಾತವು ಶಿವಮೊಗ್ಗದ ಹೊಸನಗರ ತಾಲೂಕಿನ ನಿಟ್ಟೂರು ಬಳಿಯ ಜಲಪಾತವಾಗಿದೆ. ಇದು ನಿಟ್ಟೂರಿನಿಂದ ಸುಮಾರು 10 ಕಿಮೀ ದೂರದಲ್ಲಿ ಕೊಡಚಾದ್ರಿ ಬೆಟ್ಟದ ತಳದಲ್ಲಿದೆ. ಹೊಸನಗರದಿಂದ ಸುಮಾರು 45 ಕಿ.ಮೀ ಮತ್ತು ಶಿವಮೊಗ್ಗದಿಂದ 64.5 ಕಿ.ಮೀ ದೂರದಲ್ಲಿದೆ.
ಈ ಜಲಪಾತವು ತುಂಬಾ ಸುಂದರವಾದ ಮೆಟ್ಟಿಲುಗಳ ಜಲಪಾತವಾಗಿದೆ. ಜಲಪಾತವನ್ನು ತಲುಪಲು ನೀವು ಸುತ್ತಲೂ ಸೊಂಪಾದ ಮರಗಳಿಂದ ತುಂಬಿರುವ ಕಲ್ಲಿನ ಬೆಟ್ಟಗಳ ಮೂಲಕ ನೆಡೆದು ಕೊಂಡು ಹೋಗಬೇಕುತ್ತದೆ. ಈ ಜಲಪಾತಗಳು ವಿವಿಧ ಎತ್ತರಗಳು ಮತ್ತು ಗಾಂಭೀರ್ಯವನ್ನು ಹೊಂದಿರುವ ಜಲಪಾತಗಳ ಸರಣಿಯಾಗಿದೆ.