ಲಿಂಗನಮಕ್ಕಿ ಅಣೆಕಟ್ಟು
ಲಿಂಗನಮಕ್ಕಿ ಅಣೆಕಟ್ಟನ್ನು ಕರ್ನಾಟಕ ರಾಜ್ಯ ಸರ್ಕಾರವು 1964 ರಲ್ಲಿ ನಿರ್ಮಿಸಿದೆ. ಸಾಗರ ತಾಲ್ಲೂಕಿನ ಕಾರ್ಗಲ್ ಗ್ರಾಮದಲ್ಲಿ ಈ ಅಣೆಕಟ್ಟುನ್ನು ಶರಾವತಿ ನದಿಗೆ ಅಡ್ಡಲಾಗಿ 2.74 ಕಿಲೋಮೀಟರ್ ಉದ್ದವಾಗಿ ಕಟ್ಟಲಾಗಿದೆ . ಲಿಂಗನಮಕ್ಕಿ ಜಲಾಶಯವು ಜೋಗ ಜಲಪಾತದಿಂದ ಸುಮಾರು 9 ಕಿ.ಮೀ ದೂರದಲ್ಲಿದೆ. ಹಾಗು ಬೆಂಗಳೂರಿನಿಂದ 403 ಕಿ.ಮೀ ಹಾಗು ಶಿವಮೊಗ್ಗದಿಂದ 101 ಕಿ.ಮೀ ದೂರದಲ್ಲಿದೆ
ಈ ಅಣೆಕಟ್ಟನ್ನು ನಿರ್ಮಿಸುವುದರ ಹಿಂದಿನ ಉದ್ದೇಶವು ಆ ಪ್ರದೇಶದಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಮತ್ತು ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಹಾಯ ಮಾಡುವುದು. ಇದು ಹನ್ನೊಂದು ಗೇಟು ಅಥವಾ ದ್ವಾರ ಗಳನ್ನು ಹೊಂದಿದೆ. ಈ ಅಣೆಕಟ್ಟಿನ ಪಕ್ಕದಲ್ಲಿ ಸ್ಥಾಪಿಸಲಾದ ಜಲವಿದ್ಯುತ್ ಸ್ಥಾವರವೂ ಇದೆ.
ಸುಮಾರು 300 km2 (116 sq mi) ಪ್ರದೇಶದಲ್ಲಿ 4368 ದಶಲಕ್ಷ ಘನ ಮೀಟರ್ ನೀರನ್ನು ತಡೆಹಿಡಿಯಲು ವಿನ್ಯಾಸಗೊಳಿಸಲಾಗಿದೆ, 50.62 km2 (20 sq mi) ಜೌಗು ಪ್ರದೇಶ ಮತ್ತು 7 km2 (3 ಚದರ ಮೈಲಿ) ಒಣ ಭೂಮಿಯನ್ನು ಮುಳುಗಿಸುತ್ತದೆ, ಉಳಿದವು ಅರಣ್ಯವಾಗಿದೆ. ಭೂಮಿ ಮತ್ತು ಪಾಳುಭೂಮಿ. ಅಣೆಕಟ್ಟಿನ ಎತ್ತರವು ಸಮುದ್ರ ಮಟ್ಟದಿಂದ 1,819 ಅಡಿ.