ಮದಗದ ಕೆರೆ
ಶಿಕಾರಿಪುರದಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಮದಗದ ಕೆರೆಯೂ ಒಂದು. ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಈ ಹಾಡನ್ನು ಬಹಳಷ್ಟು ಜನರು ಕೇಳಿರುತ್ತೀರಾ, ಈ ಕೆರೆಯ ಬಗ್ಗೆಯೇ ಈ ಹಾಡಿನಲ್ಲಿ ಬಣ್ಣಿಸಿರುವುದು. ಮದಗಮಾಸುರ ಟ್ಯಾಂಕ್ ಶಿಕಾರಿಪುರದಿಂದ 10 ಕಿ.ಮೀ ದೂರದಲ್ಲಿದೆ ಮತ್ತು ಶಿವಮೊಗ್ಗ ದಿಂದ 61.7 ಕಿ.ಮೀ ದೂರದಲ್ಲಿ ಇದೆ.
ಮದಗಮಾಸುರು ಟ್ಯಾಂಕ್ ಅಥವಾ ಭಗೀರಥಿ ಟ್ಯಾಂಕ್ ಎಂದು ಕರೆಯಲಾಗುವ ಈ ಟ್ಯಾಂಕ್‌ನ್ನು ಕುಮುದ್ವತಿ ನದಿಯ ಉದ್ದಕ್ಕೂ ನಿರ್ಮಿಸಲಾಗಿದೆ. ಇದು ಪ್ರವಾಸಿಗರಿಗೆ ಸೂಕ್ತ ಪ್ರವಾಸಿ ತಾಣವಾಗಿದೆ ಮತ್ತು ಅನೇಕ ಪ್ರವಾಸಿಗರು ನೆರೆಯ ಜಿಲ್ಲೆಗಳಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮಾಸೂರ್ ಸರೋವರ ಮತ್ತು ಕೆಂಚಮ್ಮನಾ ಕೆರೆ ಎಂದೂ ಕರೆಯಲ್ಪಡುವ ಮದಗದ ಕೆರೆ ಮಸೂರ್ ಸಮೀಪದ ಮದಗಾ ಎಂಬಲ್ಲಿನ ಸುಂದರವಾದ ದೊಡ್ಡ ಸರೋವರವಾಗಿದೆ.