ಮಾಲತಿ ನದಿ
ಮಾಲತಿ ನದಿಯು ತೀರ್ಥಹಳ್ಳಿ ತಾಲೂಕಿನಲ್ಲಿ ಹರಿಯುವ ಒಂದು ಪ್ರಮುಖ ನದಿಯಾಗಿದ್ದು. ಈ ನದಿಯು ಭೀಮನಕಟ್ಟೆ ಎಂಬಲ್ಲಿ ತುಂಗೆಯೊಂದಿಗೆ ವಿಲೀನವಾಗಿ ಹರಿಯುತ್ತದೆ. ಈ ನದಿಯು ವರ್ಷದ ಎಲ್ಲ ದಿನಗಳಲ್ಲೂ ಹರಿಯುವ ಪ್ರಮುಖ ನದಿಯಾಗಿದೆ.
ಮಲೆನಾಡಿನ ಮಳೆಗಾಲದ ಸಮಯದಲ್ಲಿ ಮಾಲತಿ ನದಿಯು ಮೈ ತುಂಬಿ ಹರಿಯುವ ನದಿಯಾಗಿದ್ದು, ಈ ನದಿಯ ಪಕ್ಕದಲ್ಲಿ ಹಲವಾರು ರೈತರು ತಮ್ಮ ಅಡಿಕೆ ತೋಟಗಳಿಗೆ ಕೃಷಿ ಪಂಪ್ಸೆಟ್ ಗಾಲ ಮೂಲಕ ನೀರು ಸಿಂಪಡಿಸುತ್ತಾರೆ.