ಸೀತಾ ನದಿ
ಸೀತಾ ನದಿಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಬರುವ ಒಂದು ನದಿಯಾಗಿದ್ದು. ಈ ನದಿಯು ಪಶ್ಚಿಮಕ್ಕೆ ಹರಿಯುವ ನದಿಯಾಗಿದ್ದು, ಇದು ಕರ್ನಾಟಕ ರಾಜ್ಯದ ಶಿವಮೊಗ್ಗದಲ್ಲಿದೆ, ಇದು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಹರಿಯುತ್ತದೆ.
ಈ ನದಿಯು ನರಸಿಂಹ ಪರ್ವತದ ಬಳಿ ಹುಟ್ಟಿ ಅಗುಂಬೆ ಕಾಡುಗಳ ಮೂಲಕ ಹಾದು ಹೆಬ್ರಿ, ಬಾರ್ಕೂರ್ ಬಳಿ ಹರಿಯುತ್ತಾ ಸುವರ್ಣ ನದಿಯ ಸಂಗಮವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಮಟ್ಟಕ್ಕೆ ಏರುತ್ತದೆ.
ಈ ನದಿಯು ಸಣ್ಣ ಉಪನದಿಗಳನ್ನು ಸೇರಿ ಕುಡ್ಲು ಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ ಮುಂತಾದ ಹಲವಾರು ಜಲಪಾತಗಳಾಗಿ ಮಾರ್ಪಟ್ಟು ಜನರನ್ನು ಆಕಾಶಿಸುತ್ತದೆ. ಜೂನ್ ನಿಂದ ಅಕ್ಟೋಬರ್ ಅವಧಿಯಲ್ಲಿ ಸಾಹಸ ಪ್ರಿಯರು ರಿವರ್ ರಾಫ್ಟಿಂಗ್ ಕೂಡ ಕೈಗೊಳ್ಳುತ್ತಾರೆ.