ತಾವರೆಕೊಪ್ಪ
ತ್ಯಾವರೆಕೊಪ್ಪ ವನ್ಯಧಾಮವು ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ‘ಲಯನ್ ಸಫಾರಿ’ ಅಥವಾ ‘ಸಿಂಹಧಾಮ’ ಎಂದೇ ಹೆಚ್ಚು ಫೇಮಸ್ ಆಗಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಮೀಸಲು 200 ಹೆಕ್ಟೇರ್ ಭೂಮಿಯಲ್ಲಿ ವ್ಯಾಪಿಸಿದೆ
ಇದು ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಇದ್ದು, ಶಿವಮೊಗ್ಗದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಇಲ್ಲಿ ಅರಣ್ಯ ಇಲಾಖೆಯವರು ಹುಲಿ-ಸಿಂಹ ಧಾಮವನ್ನು ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯವರು ಇದರಲ್ಲಿ 1988 ನೇ ಇಸವಿಯಿಂದ ಹುಲಿ ಸಿಂಹ ಸಫಾರಿಯನ್ನು ಅಯೋಜಿಸಿದ್ದಾರೆ.
ಇದು ತೆರೆದ ಮೃಗಾಲಯವಾಗಿದ್ದು, ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಸಫಾರಿಗಳನ್ನು ನಡೆಸಲಾಗುತ್ತದೆ. ವನ್ಯಜೀವಿ ಸಫಾರಿ 1998 ರಲ್ಲಿ ಪ್ರಾರಂಭವಾಯಿತು. ಅಭಯಾರಣ್ಯದ ಸಮಯ: ಮಂಗಳವಾರ ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 2:15 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ.
ಇದಕ್ಕಾಗಿ ಅರಣ್ಯ ಇಲಾಖೆಯವರು ವಿಶೇಷ ವಾಹನಗಳನ್ನು ಬಳಸುತ್ತಾರೆ. ಇಲ್ಲಿ ಹುಲಿ-ಸಿಂಹಗಳಸ್ಟೇ ಅಲ್ಲದೆ ಕರಡಿ, ಜಿಂಕೆ, ಸಾರಂಗ, ಸಾಂಬಾರ್, ಕಡವೆ ಮುಂತಾದ ಹಲವಾರು ವನ್ಯ ಜೀವಿಗಳನ್ನು ಕೂಡ ಹೊಂದಿದ್ದಾರೆ. ಒಟ್ಟಿನಲ್ಲಿ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.
ಇಲ್ಲಿ ಕಾಡು ಕೋಣ, ಸ್ಲಾಥ್ ಬೇರ್, ಕತ್ತೆ ಕಿರುಬ, ಜಿಂಕೆ, ಕಪ್ಪು ಚಿರತೆ, ಮೊಸಳೆ, ನವಿಲು, ಆಸ್ಟ್ರಿಚ್ ಪಕ್ಷಿ, ನೀರಾನೆ, ವಿವಿಧ ಜಾತಿಯ ಗಿಳಿಗಳು, ಬಾತುಕೋಳಿಗಳು, ಹೆಬ್ಬಾವು ಹೀಗೆ ಅನೇಕ ಸರಿಸೃಪಗಳನ್ನು ವೀಕ್ಷಿಸಬಹುದು. ಸಫಾರಿಗೆ ಶುಲ್ಕವಿದ್ದು, ಸಫಾರಿ ಹೋದಾಗ ಹುಲಿ ಮತ್ತು ಸಿಂಹಗಳನ್ನು ನೋಡಬಹುದು. ಮಕ್ಕಳು ಸಫಾರಿ ವೀಕ್ಷಿಸಿ, ಪ್ರಾಣಿಗಳನ್ನು ನೋಡಿ ಬಂದ ಮೇಲೆ ಆಟವಾಡಲು ಸ್ವಚ್ಛ ಸುಂದರವಾಗಿರುವ ಉದ್ಯಾನವನವಿದೆ. ಇಲ್ಲಿ ಮಕ್ಕಳೊಂದಿಗೆ ಪಾಲಕರು ಉತ್ತಮ ಸಮಯ ಕಳೆಯಬಹುದು. ಇತ್ತೀಚಿನ ದಿನಗಳಲ್ಲಿ ಜೀಪ್ ಸಫಾರಿ ಹೆಚ್ಚು ಜನಪ್ರಿಯವಾಗಿದೆ.