ಶ್ರೀಲಲಿತ

ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ ಹಾಗು ಭದ್ರಾವತಿಯಲ್ಲಿ ಹುಟ್ಟಿ ಬೆಳೆದವರು. 1970ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ನಟಿಸದರು. ಶ್ರೀಲಲಿತ ಅವರ ಕೆಲವು ಮಹತ್ವದ ಚಿತ್ರಗಳೆಂದರೆ ನಾಡಿನ ಭಾಗ್ಯ, ಅಪರಿಚಿತ , ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ಮಾಯೆಯ ಮುಸುಕು, ಬಾಳು ಬಂಗಾರ ಮತ್ತು ಹೆಂಡ್ತೀರೆ ಹುಷಾರ್. ಪ್ರಸಿದ್ಧ ನಿರ್ದೇಶಕ ಬಸವರಾಜ್ ಕೆಸ್ತೂರ್ ಅವರ ವಿಭಿನ್ನ ಚಿತ್ರಗಳಾದ ನಂಜುಂಡ ನಕ್ಕಾಗ, ಸಂಘರ್ಷ ಮತ್ತು ಸ್ವಾಮೀಜಿ ಚಿತ್ರಗಳಲ್ಲಿ ನಾಯಕಿಯಾಗಿ ವಿಶಿಷ್ಠ ಅಭಿನಯ ನೀಡಿದ್ದಾರೆ.

ಕನ್ನಡದ ಜನಪ್ರಿಯ ನಟರಾದ ಮಾನು ಅವರೊಂದಿಗೆ ಶ್ರೀ ರಾಘವೇಂದ್ರ ಕರುಣೆ 1980 ರಲ್ಲಿ ಮತ್ತು ಮೈಲಾರ ಲಿಂಗ 1989 ರಲ್ಲಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ರಾಜೇಶ್, ಸುದರ್ಶನ್, ಶ್ರೀನಾಥ್, ಗಂಗಾಧರ್, ಅಂಬರೀಶ್, ಶ್ರೀನಿವಾಸಮೂರ್ತಿ, ಮಾನು, ರಾಮ್ ಗೋಪಾಲ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!