ಪ್ರವೀಣ್ ತೇಜ್

ಪ್ರವೀಣ್ ತೇಜ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ. ಪ್ರವೀಣ್ ತೇಜ್ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 03 ಡಿಸೆಂಬರ್ 1984 ರಂದು ಲಕ್ಷ್ಮಣ ಗೌಡ ಮತ್ತು ಪದ್ಮಾವತಿ ದಂಪತಿಗೆ ಜನಿಸಿದರು. ಕನ್ನಡದಲ್ಲಿ ಅವರ ಚಿತ್ರರಂಗದ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರವೀಣ್ ಅವರು ಜಾಲಿ ಡೇಸ್(2009)  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಸುವರ್ಣ ಟಿವಿಯಲ್ಲಿ ಪ್ಯಾಟೆ ಮಂದಿ ಕಾಡಿಗೆ ಬಂದ್ರು (2011) ದೂರದರ್ಶನ ಸರಣಿಯಲ್ಲಿ ನಟಿಸಿದರು, ರಾಧಾ ಕಲ್ಯಾಣ (2012) ಜೀ ಕನ್ನಡದಲ್ಲಿ ಪ್ರಸಾರವಾಯಿತು. ಪ್ರವೀಣ್ 2014 ರಲ್ಲಿ ದೀಪಿಕಾ ನಜ್ರೆ ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನಿದ್ದಾನೆ.

ಅವರು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ(2016) ಕುಶ್ ಪಾತ್ರವನ್ನು ಇದು ಕನ್ನಡದ ಹಿಟ್ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಯ ಉತ್ತರಭಾಗವಾಗಿದೆ.  ಮತ್ತು ಮುಂದಿನ ನಿಲ್ದಣ(2019)ದಲ್ಲಿ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಪ್ರವೀಣ್ ನಂತರ ಅನ್ನಿ ಸಂತೋಷ್ ಗೌಡ ನಿರ್ದೇಶನದ ಆಂತರ್ಯ ಚಿತ್ರದಲ್ಲಿ ಕೃಷ್ಣನಾಗಿ (2013) ನಟಿಸಿದರು. ಅವರ ಇತರ ಚಿತ್ರಗಳು 5G (2017), ಕುಚಿಕು ಕುಚಿಕು (2018).

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ