ಗುಳಿ ಗುಳಿ ಶಂಕರೇಶ್ವರ ದೇವಸ್ಥಾನ

ಗುಳಿ ಗುಳಿ ಶಂಕರ ಕೊಳ ಮತ್ತು ಗುಳಿ ಗುಳಿ ಶಂಕರ ದೇವಾಲಯವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯತಿ ಗುಬ್ಬಿಗ ಗ್ರಾಮದಲ್ಲಿ ಇದೆ. ಇಲ್ಲಿರುವ ಮಾಂತ್ರಿಕ ಕೊಳವನ್ನು ಚಪ್ಪಾಳೆ ಕೊಳ, ಗುಳಿ ಗುಳಿ ಕೊಳ, ನೀರ್ಗುಳ್ಳೆ ಕೊಳ, ಗೌರಿ ತೀರ್ಥ ಅಥವಾ ಗುಳಿ ಗುಳಿ ಶಂಕರ ಎಂದು ಸಹ ಕರೆಯುತ್ತಾರೆ. ಈ ಕೊಳವು ವಿಷ್ಮಯಕಾರಿ ಆಗಿದ್ದು ಈ ಕೊಳವನ್ನು ಜಟಾತೀರ್ಥ ಎಂದು ಕರೆಯುತ್ತಾರೆ.

ಗುಳಿ ಗುಳಿ ಶಂಕರ ಕೊಳ ಮತ್ತು ಗುಳಿ ಗುಳಿ ಶಂಕರ ದೇವಾಲಯವು ಬೆಂಗಳೂರಿನಿಂದ ಸುಮಾರು 341 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ನಗರದಿಂದ ಸುಮಾರು 34 ಕಿ.ಮೀ ದೂರದಲ್ಲಿದೆ ಹಾಗೂ ಆಯನೂರು ನಿಂದ 17 ಕಿ.ಮೀ ದೂರದಲ್ಲಿದೆ.

ಇಲ್ಲಿ ಬಿಲ್ವಪತ್ರೆಯ ರಶೀದಿ ಪಡೆಯಲು RS.20/- ನೀಡಬೇಕು. ನಂತರ ವಿಶೇಷವಾಗಿ ಹರಕೆ ಹೊತ್ತುಕೊಂಡು ಬಿಲ್ವಪತ್ರೆ ಕೊಳದಲ್ಲಿ ಬಿಡಲಾಗುತ್ತದೆ.

ಈ ಕೊಳದಲ್ಲಿ ಯಾವುದೇ ಎಲೆ ಹಾಕಿದರೂ ಮುಳುಗುವುದಿಲ್ಲ. ಆದರೆ ಬಿಲ್ವಪತ್ರೆ ಎಲೆಯನ್ನು ಹಾಕಿದರೆ ಮಾತ್ರ ಮುಳುಗುತ್ತದೆ. ವಿಶೇಷವಾಗಿ ಹರಕೆ ಹೊತ್ತುಕೊಂಡು ಬಿಲ್ವಪತ್ರೆ ಬಿಡಲಾಗುತ್ತದೆ, ಬಿಲ್ವಪತ್ರೆ ಎಲೆ ಕೋರಿಕೆ ಈಡೇರುತ್ತದೆ ಎನ್ನುವುದಾರೆ ಮೇಲೆ ಬರುತ್ತದೆ. ಇಲ್ಲವಾದಲ್ಲಿ ಅದು ಮೇಲೆ ಬರುವುದಿಲ್ಲ.

ಮೇಲೆ ತೇಲಿದ ಬಿಲ್ವಪತ್ರೆ ಎಲೆಯನ್ನು ಕೊಳದ ಪಕ್ಕದಲ್ಲಿರುವ ಶಿವಲಿಂಗದ ಮೇಲೆ ಇಟ್ಟು ಪೂಜೆ ಮಾಡಲಾಗುತ್ತದೆ. ವಿಶೇಷವಾಗಿ ಈ ಕೊಳದಲ್ಲಿ ಬಿಟ್ಟ ಬಿಲ್ವಪತ್ರೆ ಎಲೆ ಕೊಳದಲ್ಲಿರುವ ಶಿವ ಲಿಂಗ ಮುಟ್ಟಿ ಬಂದರೆ ಅಂಥವರ ಜೀವನ ಪಾವನವಾಗುತ್ತದೆ ಎಂದು ನಂಬಲಾಗುತ್ತದೆ.

ಇತಿಹಾಸ

ಇದು ಶಿವ ದೇವ ಮತ್ತು ಪಾರ್ವತಿ ದೇವಿ ವಿಶ್ರಾಂತಿಗೆ ಬರುವಂತಹ ಸ್ಥಳವಾಗಿತ್ತು ಎನ್ನಲಾಗುತ್ತದೆ. ಹೀಗೆ ಇಬ್ಬರು ವಿಶ್ರಾಂತಿ ಪಡೆಯುವಾಗ ತುಂಬಾ ಆಯಾಸವಾಗಿದ್ದ ಶಿವ ಪಾರ್ವತಿಗೆ ತನ್ನ ಜಟಾ(ಜಡೆ) ಮೂಲಕ ಗಂಗೆಯಾಗಿ ಬರುವಂತೆ ಹೇಳಿದನಂತೆ. ಆಗ ಪಾರ್ವತಿ ಗಂಗೆಯಾಗಿ ಶಿವನ ಜಡೆ ಮೂಲಕ ಹರಿದು ಶಿವನ ದಾಹ ತೀರಿಸಿದಳಂತೆ. ಶಿವನ ದಾಹ ತೀರಿದ ಬಳಿಕ ಗಂಗೆಗೆ ನೀನು ಇಲ್ಲಿರುವ ಸಕಲ ಜೀವ ರಾಶಿಗೆ ನೀರು ನೀಡಲು ಇಲ್ಲೇ ಉಳಿಯಬೇಕು ಎಂದನಂತೆ. ಆಗ ಗಂಗೆ ನೀನು ಇಲ್ಲಿ ಉಳಿಯುವುದಾದರೆ ನಾನು ಇಲ್ಲಿರುತ್ತೇನೆ ಎಂದಳಂತೆ. ಆಗ ಖುಷಿಯಿಂದ ಶಿವ ಇಲ್ಲಿ ಉಳಿಯಲು ನಿರ್ಧರಿಸಿದ. ನಂತರ ಶಿವನೊಂದಿಗೆ ಗಂಗೆ ಕೂಡ ಇಲ್ಲಿ ಉಳಿಯುತ್ತಾಳೆ. ಹೀಗಾಗಿ ಇದನ್ನು ಜಟಾತೀರ್ಥ ಎಂದು ಕರೆಯಲಾಗುತ್ತದೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ