ಅರುಣ್ ಸಾಗರ್
ಅರುಣ್ ಸಾಗರ್ ಇವರು ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮತ್ತು ಹಾಸ್ಯ ಕಲಾವಿದ. ಇವರು ಅಕ್ಟೋಬರ್ ೨೩ ೧೯೬೫ ರಂದು ಸಾಗರದಲ್ಲಿ ಜನಿಸಿದರು. ಇವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಮೊದಲಿನಿಂದಲೂ ಸಹ ಇವರನ್ನು ಒಬ್ಬ ಹಾಸ್ಯ ಕಲಾವಿದ ಎಂದಲೇ ಗುರುತಿಸಿಕೊಂಡಿದ್ಡಾರೆ.
ಇವರು ಕನ್ನಡ ಚಿತ್ರರಂಗದಲ್ಲಿ ಅಲ್ಲದೆ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ನಟಿಸಿದ್ದು, ಕೆ ರಾಘವೇಂದ್ರ ರಾವ್ ರವರ ಚಿತ್ರ ಶ್ರೀ ಮಂಜುನಾಥ ಕನ್ನಡ ಮತ್ತು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ . ಇಲ್ಲಿಯವರೆಗು ಇವರು ಸುಮಾರು ೫೨ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಅನೇಕ ಪ್ರಭಾವ ಉಳ್ಲ ನಟ, ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಅರುಣ್ ಸಾಗರ್ ಅವರು ಪೂರಿ ಜಗನ್ನಾಥ, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ. ರಾಘವೇಂದ್ರ ರಾವ್ ಅನೇಕ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.
ವೀರ ಮದಕರಿ, ಮರ್ಮ, ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ, ನಂ ೭೩ ಶಾಂತಿ ನಿವಾಸ, ರಿಂಗ್ ಮಾಸ್ಟೆರ್, ಜೋಕರ್, ಪೊಉರ್ನಮಿ (ತೆಲುಗು), ಸಂಡಮಾರುತಮ್ (ತೆಮಿಳು) ಹೀಗೆ ಹಲವಾರು ಸಿನಿಮಾದಲ್ಲಿ ನಟಿಸಿದರೆ.
ಇವರಿಗೆ ಭೂಮಿ ಗೀತ ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ರಾಷ್ರ ಪ್ರಶಸ್ತಿ ದೊರಕಿದೆ ಮತ್ತು ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ.