ಚಂಪಕ ಸರಸಿ

ಚಂಪಕ ಸರಸ್ಸು ಇದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಇದೆ. ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಪ್ರೀತಿಯ ಪತ್ನಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಕೊಳ ಇಂದಿನ ಚಂಪಕ ಸರಸ್ಸು ಎಂದು ಕರೆಯಲ್ಪಡುವ ಸುಂದರ ಕೊಳ.

ಚಂಪಕ ಸರಸ್ಸು ಬೆಂಗಳೂರಿನಿಂದ ( ಶಿವಮೊಗ್ಗ – ಚಿತ್ರದುರ್ಗ ರಸ್ತೆ ಮೂಲಕ ) 356.8 ಕಿಮೀ, ಶಿವಮೊಗ್ಗ ದಿಂದ 49.5 ಕಿಮೀ ಮತ್ತು ಸಾಗರ ದಿಂದ 24.0 ಕಿಮೀ ದೂರದಲ್ಲಿದೆ.

ಚಂಪಕಾ ಕೋಟೆಯಲ್ಲಿನ ಅರಮನೆಯಲ್ಲಿ ನಿತ್ಯ ಪೂಜಿಸುತ್ತಿದ್ದ ಸಣ್ಣ ಶಿಲಾ ಶಿವಲಿಂಗವೇ ಚಂಪಕ ಸರಸ್ಸು ಕೊಳದ ಮಧ್ಯದಲ್ಲಿರುವ (ಕಲ್ಲಿನ ಪಾವಟಿಕೆ ಮೂಲಕ ಹೋಗಬೇಕು) ಶಿಲಾ ದೇವಾಲಯದಲ್ಲಿ ಸ್ಥಾಪಿಸಿದ್ದಾರೆ ಈ ಶಿವಲಿಂಗದ ಎದುರು ಕಲ್ಲಿನ ಸಣ್ಣ ಬಸವಣ್ಣ ಇದೆ.

ಇತಿಹಾಸ

ಕೆಳದಿ ರಾಜ ವೆಂಕಟಪ್ಪ ನಾಯಕ ಬೆಸ್ತರ ಕುಲದ ಸುಂದರಿ ಚಂಪಕಾಳು ಬಿಡಿಸಿದ ಮನಮೋಹಕ ರಂಗೋಲಿಗೆ ಮನಸೋತು ವಿವಾಹ ಆಗಿದ್ದರು. ಈ ಅಂತರ್ಜಾತಿ ವಿವಾಹ ವಿರೋದಿಸಿದ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಹಾರ ತ್ಯಜಿಸಿ ಜೀವ ತ್ಯಾಗ ಮಾಡಿದ್ದು, ಇದರಿಂದ ಕೆಳದಿ ರಾಜ್ಯದಲ್ಲಿ ಚಂಪಕ ಮಾಯಾವಿ ಅನ್ಯ ಆಹಾರ ಸುರಾಪಾನ ಮಾಡುತ್ತಾಳೆ೦ಬ ಸುಳ್ಳು ಸುದ್ದಿ ಹರಡಿ ಪ್ರಜೆಗಳು ರಾಜ ವೆಂಕಟಪ್ಪ ನಾಯಕರನ್ನು ಖಳನಾಯಕರಂತೆ ಬಾವಿಸಿದ್ದರಿಂದ ನೊಂದ ಚಂಪಕ ವಜ್ರದ ಪುಡಿ ಮಿಶ್ರಿತ ಹಾಲು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ತನ್ನ ಪ್ರೀತಿಯ ಪತ್ನಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಈ ಸ್ಮಾರಕವೇ ಚಂಪಕ ಸರಸ್ಸು.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ