ಹೊನ್ನೆಮರಡು

ಹೊನ್ನೇಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇದೆ. ಸಾಗರದಿಂದ 25 ಕಿ.ಮೀ ದೂರದಲ್ಲಿದೆ ಮತ್ತು ಶಿವಮೊಗ್ಗದಿಂದ 98 ಕಿ.ಮೀ. ದೂರದಲ್ಲಿದೆ ಹಾಗೂ ಬೆಂಗಳೂರಿನಿಂದ 392 ಕಿ.ಮೀ ದೂರದಲ್ಲಿದೆ ಈ ಪ್ರವಾಸಿ ತಾಣ. ಇದು ಶರಾವತಿ ನದಿಯ ದಡದಲ್ಲಿರುವ ಹಿನ್ನೀರು ಪ್ರದೇಶ. ಹೊನ್ನೇಮರಡು ನಿಸರ್ಗದ ಸುಂದರ ನೋಟ. ಹೊನ್ನೆಮರಡು ಎಂದರೆ ಚಿನ್ನದ ಕೆರೆ ಎಂದರ್ಥ.

ಶರಾವತಿ ನದಿಯ ನೀರಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿರುವ ಅಣೆಕಟ್ಟೆಯು ಹೊನ್ನೇಮರಡು ಅಂತಹ ನಿಸರ್ಗ ಸಹಜ ಸೌಂದರ್ಯವನ್ನು ಸೃಷ್ಟಿ ಮಾಡಿದೆ.ಅತೀ ದೂರದ ವರೆಗೆ ಶುಭ್ರ ನೀರಿನ ನೋಟ ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಿಲ್ಲದೆ ಪ್ರವಾಸಿಗರನ್ನು ಸೆಳೆಯುತ್ತದೆ.ತೆಪ್ಪದಲ್ಲಿ ಒಂದು ಸುತ್ತು ಹಾಕಿ, ನೀರಿನ ನಡುವೆ ಇರುವ ನಡುಗಡ್ಡೆ ಗಳಿಗೆ ಹೋಗಿಬಂದರೆ ಮನಮೋಹಕ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!