ಎಸ್ ಆರ್ ರಾವ್

ಡಾ. ಎಸ್. ಆರ್. ರಾವ್ ಎಂದೇ ಕರೆಯಲ್ಪಡುತ್ತಿದ್ದ, ಡಾ. ಶಿಕಾರಿಪುರ ರಂಗನಾಥ ರಾವ್ ಇವರು 1 ಜುಲೈ 1922 ರಂದು ಶಿಕಾರಿಪುರ ತಾಲೂಕಿನ ಆನಂದಪುರ ಎಂಬ ಗ್ರಾಮದಲ್ಲಿ ಜನಿಸಿದರು. ಈ ಗ್ರಾಮವು ಸುಮಾರು ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗದಿಂದ 46 ಕಿಮೀ ದೂರದಲ್ಲಿದೆ. ಮತ್ತು ಶಿಕಾರಿಪುರದಿಂದ ಸುಮಾರು 38 ಕಿ.ಮೀ. ದೂರದಲ್ಲಿದೆ.

ಡಾ. ಎಸ್. ಆರ್. ರಾವ್ ಭಾರತದ ಪುರಾತತ್ವ ತಜ್ಞರಾಗಿ ಸಿಂಧೂತಟದ ನಾಗರೀಕತೆಗೆ, ಅದರಲ್ಲೂ ಹರಪ್ಪಗೆ ಸಂಬಂಧಿಸಿದ ಉತ್ಖನನಗಳನ್ನು ನೆಡೆಸಿದ ಹಲವಾರು ತಂಡಗಳನ್ನು ಮುನ್ನೆಡಿಸಿದ್ದರು, ಇದರಲ್ಲಿ ಗುಜರಾತ್‌ನ ಕೋಟೆಗಳ ನಗರ ಲೋಥಾಲ್ ಕೂಡ ಸೇರಿದೆ. ಇವರು ಶ್ರೀಕೃಷ್ಣ ನೆಲೆಯಾಗಿದ್ದ ಐತಿಹಾಸಿಕ ನಗರ ದ್ವಾರಕಾದ ಇರುವಿಕೆಯನ್ನೂ ಪತ್ತೆ ಹಚ್ಚಿದ್ದರು.

ಶಿಕಾರಿಪುರ ರಂಗನಾಥ ರಾವ್ ಮೈಸೂರು ವಿಶ್ವವಿದ್ಯಾಲಯದಿಂದ ತನ್ನ ಶಿಕ್ಷಣವನ್ನು ಮುಗಿಸಿದರು. ಅವರು ಬರೋಡಾ ರಾಜ್ಯದ ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಭಾರತದ ಪುರಾತತ್ವ ಇಲಾಖೆಯಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಡಾ ರಾವ್ ಅವರು ರಂಗ್ಪುರ್, ಆಮ್ರೇಲಿ , ಭಗತ್ರವ್, ದ್ವಾರಕಾ, ಹನೂರ್, ಐಹೊಳೆ, ಕಾವೇರಿಪಟ್ಟಣಂ ಮತ್ತು ಇತರ ಅನೇಕ ಪ್ರಮುಖ ಪ್ರದೇಶಗಳ ಉತ್ಖನನಗಳ ನಾಯಕತ್ವ ವಹಿಸಿದ್ದಾರೆ.

ಸಂಶೋಧನೆ ಮತ್ತು ಉತ್ಖನನಗಳು ಇತಿಹಾಸದಲ್ಲಿ ತಿಳಿವಿಗೆ ಬಂದಂಥ ಅತ್ಯಂತ ಪ್ರಾಚೀನ ಬಂದರು ಮತ್ತು ಭಾರತದ ಪ್ರಮುಖ ಸಿಂಧೂ ಕಣಿವೆಯ ಸಂಸ್ಕೃತಿಯ ಅತ್ಯಂತ ಪ್ರಮುಖ ತಾಣವಾದ ಲೋಥಾಲ್ ನಲ್ಲಿ ಸಂಶೋಧನೆ ಮತ್ತು ಉತ್ಖನನಗಳ ನಿರ್ದೇಶನ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಡಾ ರಾವ್ ಅವರು ಜವಹರಲಾಲ್ ನೆಹರೂ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ರಾವ್ ಅವರು ತಾಜಮಹಲ್ ಮತ್ತು ಕೋಟೆಗಳಂತಹ ಸ್ಮಾರಕಗಳ ಸಂರಕ್ಷಣೆಯಲ್ಲೂ ತೊಡಗಿಕೊಂಡಿದ್ದವರು. ಅಧಿಕೃತವಾಗಿ ೧೯೮೦ ರಲ್ಲಿ ನಿವೃತ್ತಿ ಹೊಂದಿದರೂ ಕೂಡ. ಅವರು ಸಿಂಧೂತಟದ ನಾಗರೀಕತೆಯ ತಾಣಗಳಿಂದ ಹಿಡಿದು ಕುರುಕ್ಷೇತ್ರ ಯುದ್ಧಕ್ಕೆ ಸಂಬಂಧಿಸಿದ ಉತ್ಖನನಗಳವರೆಗೆ ಭಾರತದ ಪ್ರಾಚೀನ ಇತಿಹಾಸದ ಬಗೆಗಿನ ವ್ಯಾಪಕ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ.

ರಾವ್ ಅವರು ೧೯೯೨ರಲ್ಲಿ ಸಿಂಧೂಲಿಪಿಯನ್ನು ಅರ್ಥೈಸಿದುದಾಗಿ ಘೋಷಿಸಿದರು. ಇವರ ವಿಧಾನವನ್ನು ಇತರ ತಜ್ಞರು ಒಪ್ಪಿರುವರಾದರೂ ಇವರ ಪರಿಹಾರವನ್ನು ಒಪ್ಪಿಲ್ಲವಾದ ಕಾರಣ ಸಿಂಧೂಲಿಪಿಯು ಇನ್ನೂ ಬಿಡಿಸದ ಲಿಪಿಯಾಗಿ ಮುಂದುವರೆದಿದೆ.

ದ್ವಾರಕೆಯ ಹತ್ತಿರದ ಕುಶಸ್ಥಲಿ ಎಂಬ ಸ್ಥಳದಲ್ಲಿ ರಾವ್ ಮತ್ತು ಅವರ ತಂಡವು ಸಮುದ್ರದ ದಂಡೆಯಿಂದಲೇ ಕಾಣುವ 560ಮೀಟರ್ ಉದ್ದದ ಗೋಡೆಯನ್ನು ಕಂಡರು. ಅಲ್ಲಿ ಸಿಕ್ಕ ಮಡಿಕೆಯ ಕಾಲನಿರ್ಣಯದಿಂದ ಅದು ಕ್ರಿ.ಪೂ. 1528ರದೆಂದು ತಿಳಿದುಬಂದಿತು. ಅಲ್ಲಿ ಒಂದು ಮುದ್ರೆಯೂ ಸಿಕ್ಕಿತು. ದ್ವಾರಕೆಯ ನೀರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದ ಮೂರು ರಂಧ್ರವಿರುವ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಲೋಥಾಲ್ ಮತ್ತು ಮೊಹೆಂಜೋದಾರೋಗಳಲ್ಲಿ ಸಿಕ್ಕ ಒಂದು ಒಂದು ರಂಧ್ರವನ್ನು ಹೊಂದಿದ್ದ ನಿರ್ವಾಹಕರು ಲಂಗರುಗಳ ವಿಕಸನದಲ್ಲಿ ಮುಂದುವರಿಕೆಯನ್ನು ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.

ರಾವ್ ಅವರು ಬೆಳಕಿಗೆ ಬಂದ ದ್ವಾರಕೆಯ ಅವಶೇಷಗಳು, ವಿಷ್ಣುವಿನ ಎಂಟನೇ ಅವತಾರ ಕೃಷ್ಣನ ನೆಲೆಯಾದ ಐತಿಹಾಸಿಕ ದ್ವಾರಕಾನಗರ ಎಂದು ಪ್ರತಿಪಾದಿಸಿದರು. ನಂತರ ಇವರು 3 January 2013 ರಂದು ನಿಧನ ಹೊಂದಿದರು.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!