ನಾಡಕಲಸಿ

ನಾಡಕಲಸಿ ದೇವಾಲಯವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಮೀಪವಿರುವ ಒಂದು ಸಣ್ಣ ಹಳ್ಳಿ. ಇದು ಬೆಂಗಳೂರಿನಿಂದ 395 ಕಿ.ಮೀ. ದೂರದಲ್ಲಿದೆ. ನಾಡಕಲಸಿ ದೇವಾಲಯವು ಸಾಗರ ಪಟ್ಟಣದಿಂದ 13 ಕಿಮೀ ದೂರದಲ್ಲಿದೆ ಮತ್ತು ಇದು ಶಿವಮೊಗ್ಗದಿಂದ 75 ಕಿಮೀ ದೂರದಲ್ಲಿದೆ. ಇದು ಸಾಗರ ನಗರದ (SRF) ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ ಮತ್ತು 13 ಕಿಮೀ ದೂರದಲ್ಲಿದೆ.

ನಾಡಕಲಸಿಯು ಒಂದು ಚಿಕ್ಕ ಶಿವ ದೇವಾಲಯವನ್ನು ಹೊಂದಿದೆ. ಪಾಂಡವರು ತಮ್ಮ ವನವಾಸ ಕಾಲದಲ್ಲಿ ನಾದಕಲಸಿಯಲ್ಲಿ ವಿಶ್ರಮಿಸುತ್ತಿದ್ದರು ಎಂದು ಹೇಳಲಾಗುತ್ತದೆ. ನಾಡಕಲಸಿ ದೇವಾಲಯದ ಸಂಕೀರ್ಣವು ಎರಡು ದೇವಾಲಯಗಳನ್ನು ಹೊಂದಿದೆ, ಒಂದು ಮಲ್ಲಿಕಾರ್ಜುನ ಮತ್ತು ಇನ್ನೊಂದು ರಾಮೇಶ್ವರ. ನಾಡಕಲಸಿ ದೇವಾಲಯದ ಸಂಕೀರ್ಣವು ಕನಿಷ್ಠ 1200 ವರ್ಷಗಳಷ್ಟು ಹಳೆಯದು. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಹೇಳಲಿಲ್ಲ.

ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಜಿರಳೆಕಲ್ಲು ಎಂಬ ಕಂಬ. ಇಲ್ಲಿನ ಅರ್ಚಕರು ಮಣ್ಣನ್ನು ಇದಕ್ಕೆ ತೇಯ್ದು , ಮಂತ್ರಿಸಿ ನೀಡುತ್ತಾರಂತೆ. ಅದರಿಂದ ಕಾಲು ನೋವು ಸರಿಯಾಗಿದೆಯಂತೆ. ಬುದ್ದಿ ಭ್ರಮಣೆಯಾದವರು, ಮಕ್ಕಳಾಗದವರು ಹೀಗೆ ಅನೇಕರು ಇಲ್ಲಿಗೆ ಬಂದು ಈ ಜಿರಲೆಕಲ್ಲಿನ ಮಹಿಮೆಗೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಸುತ್ತಲೂ ಇರುವ ಪ್ರದಕ್ಷಿಣಾಪಥವು ನವರಂಗಕ್ಕೆ ಸೇರಿಕೊಳ್ಳುವ ವಿನ್ಯಾಸ ಸಾಮಾನ್ಯವಾಗಿ ದ್ರಾವಿಡ ಶೈಲಿಯಲ್ಲಿ ಕಂಡು ಬರುತ್ತದೆ. ಅದು ಹೊಯ್ಸಳ ಶೈಲಿಯಲ್ಲಿ ಅತೀ ವಿರಳವಾಗಿದ್ದು ಅದನ್ನು ಇಲ್ಲಿ ಕಾಣಬಹುದು ಎಂಬುವುದನ್ನು ಮಾಹಿತಿ ಫಲಕ ಹೇಳುತ್ತದೆ. ಇದರ ಎದುರೊಂದು ನಂದಿಯಿದೆ. ಗರ್ಭಗುಡಿಯೊಳಗೆ ಬೆಳಕಿಲ್ಲದಿರುವುದರಿಂದ ಮಂಗಳಾರತಿಯ ಬೆಳಕಿನಲ್ಲಿ ಶ್ರೀ ರಾಮೇಶ್ವರನನ್ನು ನೋಡುವುದೇ ಒಂದು ಪುಣ್ಯ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ